ರಿಚ್ ಮಂಡ್ ಕನ್ನಡ ಸಂಘ

Richmond Kannada Sangha

ರಿಚ್ಮಂಡ್ ಕನ್ನಡ ಸಂಘ - ಒಂದು ಕಿರು ಪರಿಚಯ

ಉತ್ತರ ಅಮೇರಿಕದ ಪೂರ್ವ ಭಾಗದ ವರ್ಜೀನಿಯಾ ರಾಜ್ಯದ ರಾಜಧಾನಿ ನಗರವಾದ ರಿಚ್ಮಂಡ್ ನಗರದಲ್ಲಿನ ಕನ್ನಡಿಗ ಸಂಸಾರಗಳು ಒಟ್ಟು ಮನಸ್ಸಿನಿಂದ ಹುಟ್ಟು ಹಾಕಿದ ಸಂಸ್ಥೆಯ ಹೆಸರು "ರಿಚ್ಮಂಡ್ ಕನ್ನಡ ಸಂಘ".

ಸುಮಾರು ೧೯೭0 - ೮0 ರ ದಶಕದಲ್ಲಿ ಕನ್ನಡಿಗ ಸಂಸಾರಗಳು ರಿಚ್ಮಂಡ್ ನಗರಕ್ಕೆ ವಲಸೆ ಬಂದವು. ಇದರಲ್ಲಿ ಮುಖ್ಯವಾಗಿ ಶ್ರೀ ಶರತ್ ಚಂದ್ರ ಕುಟುಂಬ, ಡಾ. ವಿಜಯ ರಾಘವನ್ ಕುಟುಂಬ, ಶ್ರೀ ಮುದ್ದಪ್ಪರಂಗಪ್ಪ ಕುಟುಂಬ, ಶ್ರೀ ನಂಜುಂಡ ರಾಮ್ ಕುಟುಂಬ, ಶ್ರೀ ಈಶ್ವರ್ ರಾಜು ಕುಟುಂಬ, ಶ್ರೀ ಗೋಪಾಲ ಕೃಷ್ಣ ಕುಟುಂಬ, ಶ್ರೀ ಮೂರ್ತಿ ಕುಟುಂಬ, ಶ್ರೀ ಹನುಮಯ್ಯ ಗೌಡ ಕುಟುಂಬ, ಡಾ. ಜಿ.ಎಸ್.ಮೂರ್ತಿ ಕುಟುಂಬ ಮತ್ತು ಇತರೆ ಕುಟುಂಬಗಳು. ಈ ಕುಟುಂಬಗಳು ರಿಚ್ಮಂಡ್ ಕನ್ನಡ ಸಂಘ ವನ್ನು ಅಧಿಕೃತವಾಗಿ ಸ್ಥಾಪಿಸುವ ಮುಂಚಿನಿಂದಲೂ ವಾರಾಂತ್ಯದಲ್ಲೋ ಅಥವಾ ಹಬ್ಬ ಹರಿದಿನಗಳಲ್ಲೋ ಓಟ್ಟಾಗಿ ಸೇರಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿವೆ.

ರಿಚ್ಮಂಡ್ ಕನ್ನಡ ಸಂಘವು ೨೦೦೦ನೇ ಇಸವಿಯಲ್ಲಿ ಆರಂಭವಾಗಿ, ನಂತರ ಅಧಿಕೃತವಾಗಿ ನೋಂದಣಿ ಆಗಿದ್ದು, ಇಂದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಹಲವಾರು ವರ್ಷಗಳಿಂದ ರಿಚ್ಮಂಡ್ ನಗರದಲ್ಲಿ ನೆಲೆಸಿ, ಕನ್ನಡ ಸಂಸ್ಥೆ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಶ್ರೀಯುತರಾದ ಡಾ| ರವೀಂದ್ರ (ಅಧ್ಯಕ್ಷರು), ಮಧು ಉಪಾಧ್ಯ (ಕಾರ್ಯದರ್ಶಿ) ಹಾಗೂ ಸತ್ಯ ವೆಂಕಟರಾಮನ್ (ಖಜಾಂಚಿ) ಅವರು ಸಂಸ್ಥೆಯ ಪ್ರಥಮ ಸಮಿತಿ ಸದಸ್ಯರ ಹೆಗ್ಗಳಿಕೆ ಪಡೆದಿರುವವರಾಗಿದ್ದಾರೆ. ಯಾವುದೇ ಒಂದು ಉತ್ತಮ ಕೆಲಸವಾಗಬೇಕಾದರೆ ಅದರ ಆರಂಭ ಸರಿ ಇರಬೇಕು. ಒಂದು ಸಂಘವು ಶಕ್ತಿಯಾಗಿ ಬೆಳೆಯುತ್ತ ಸಾಗಿದೆ ಎಂದಾದರೆ ಅದರ ಅಡಿಪಾಯ ಗಟ್ಟಿ ಇತ್ತು ಎಂಬುದು ಸತ್ಯ.

ನಂತರ ೨೦೦೨-೨೦೦೪ ಸರದಿಗೆ ಶ್ರೀಯುತರಾದ ಗೋಪಾಲಕೃಷ್ಣ(ಅಧ್ಯಕ್ಷರು), ಗಣೇಶ್ ನಾಯಕ್ ಹಾಗೂ ಶ್ರೀಮತಿ. ಅಹಲ್ಯ ವಿಜಯ್ ಅವರುಗಳು ಸಮಿತಿಯ ಸದಸ್ಯತ್ವ ವಹಿಸಿಕೊಂಡರು. ಮನೆ-ಮನಗಳಲ್ಲಿ ಕನ್ನಡಕ್ಕೆ ಮೊದಲ ಪ್ರಧಾನ್ಯತೆ ನೀಡಬೇಕೆಂಬುದೇ ಅಧ್ಯಕ್ಷರ ಧ್ಯೇಯವಾಗಿತ್ತು.

೨೦೦೪-೨೦೦೬ ಸಾಲಿಗೆ ಶ್ರೀಯುತರಾದ ಪವನಿ ರಾಮ್(ಅಧ್ಯಕ್ಷರು), ಗಿರೀಶ್ ರಾಮಮೂರ್ತಿ ಹಾಗೂ ಶ್ರೀಮತಿ. ಲತಾ ಕುಮಾರ್. ಪವನಿರಾಮ್ ಅವರ ಅಧ್ಯಕ್ಷತೆಯಲ್ಲಿ ಸಂಘವು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡ ಸಂಘದ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿತ್ತು.

ನಂತರ ೨೦೦೭-೨೦೦೮'ರ ಸಾಲಿಗೆ ಶ್ರೀಯುತರಾದ ಶ್ರೀನಾಥ್ ಭಲ್ಲೆ (ಅಧ್ಯಕ್ಷರು), ರವಿ ಬೋರೇಗೌಡ (ಕಾರ್ಯದರ್ಶಿ) ಹಾಗೂ ಅವಿನಾಶ್ ಪಂಡರಿನಾಥ್ (ಖಜಾಂಚಿ) ಕಮಿಟಿ ಸದಸ್ಯತ್ವ ವಹಿಸಿಕೊಂಡರು. ಮೊದಲ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ ನೇಮಕವಾಗಿ ಶ್ರೀಮತಿ.ಸುಜಾತ ಅನಿಲ್ ಕುಮಾರ್ ಅವರು ಮೊದಲಿಗರಾದರು. ಎರಡು ಬಾರಿ ಚಲನಚಿತ್ರ ಮಂದಿರದಲ್ಲಿ ಕನ್ನಡ ಸಿನಿಮಾ ನೋಡುವ ಭಾಗ್ಯ ಕನ್ನಡಿಗರಿಗೆ ದೊರೆಯಿತು. ಪ್ರಮುಖವಾಗಿ ಕನ್ನಡ ಸದಸ್ಯರಲ್ಲಿ ಹುದುಗಿದ್ದ ಹಾಡುಗಾರಿಕೆಯ ಕಲೆಯನ್ನು ಹೊರೆಗೆಳೆಯುವ ಒಂದು ಪ್ರಯತ್ನ ರೂಪವಾಗಿ "ಸಂಗೀತ ಸಂಜೆ" ಶುರುವಾಗಿದ್ದು ಕೂಡ ಈ ಅವಧಿಯಲ್ಲಿ. ನಂತರದ ಕಾರ್ಯಕಾರಿ ಸಮಿತಿಯವರೂ ಇದಕ್ಕೆ ಬೆಂಬಲ ಸೂಚಿಸಿದ್ದರ ಫಲವಾಗಿ ಇಂದಿಗೂ ಯಶಸ್ವಿಯಾಗಿ ನೆಡೆದುಕೊಂಡು ಹೋಗುತ್ತಿದೆ.

ನಂತರ ೨೦೦೯-೨೦೧೦ 'ರ ಕಮಿಟಿ ಸದಸ್ಯರಾಗಿ ದುಡಿದವರು ಶ್ರೀಯುತದಾರ ರಮೇಶ್ ಕುಂದೂರ್ (ಅಧ್ಯಕ್ಷರು), ಸುರೇಶ್ ಗೌಡ (ಕಾರ್ಯದರ್ಶಿ), ಅನಿಲ್ ಕುಮಾರ್ (ಖಜಾಂಚಿ) ಮತ್ತು ಶ್ರೀಮತಿ ಆರತಿ ವೆಂಕಟೇಶ್ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ). ಆಧುನಿಕ ತಂತ್ರಜ್ಞ್ನಾನದ ಬಳಕೆ ಹೆಚ್ಚಾಗಿ ಕಂಡು ಬಂದಿದ್ದು ಈ ಅವಧಿಯಲ್ಲಿ. ಸದಸ್ಯರು ಇದಕ್ಕೆ ಕೈಗೂಡಿಸಿ ಬೆಂಬಲ ಸೂಚಿಸಿದ್ದರ ಫಲವಾಗಿ ಇಂದು ತಂತ್ರಜ್ಞ್ನಾನದ ಬಳಕೆಯ ವ್ಯಾಪ್ತಿಯೂ ಹೆಚ್ಚಾಗಿದೆ.

ನಂತರ ೨೦೧೧-೨೦೧೨'ರ ಕಮಿಟಿ ಸದಸ್ಯರಾಗಿ ಸಂಘವನ್ನು ಮುನ್ನೆಡೆಸಿದವರು ಶ್ರೀಯುತರಾದ ಸಂಜೀವ ಗಿರಿಭಟ್ಟನಾವರ್ (ಅಧ್ಯಕ್ಷರು), ಕೃಷ್ಣಮೂರ್ತಿ ಗಿರಿಮಾಜಿ (ಕಾರ್ಯದರ್ಶಿ), ವೆಂಕಟೇಶ್ ಬಚ್ಚು (ಖಜಾಂಚಿ), ಶ್ರೀಮತಿ ನಮಿತಾ ಪ್ರಕಾಶ್ ಮತ್ತು ಶ್ರೀ ರಾಜಗೋಪಾಲ್ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿಗಳು). ಈ ಅವಧಿಯಲ್ಲಿ ಅಮೇರಿಕಕ್ಕೆ ಭೇಟಿ ನೀಡಿದ್ದ ಹಲವು ಕ್ಷೇತ್ರಗಳ ಹಿರಿಯರನ್ನು ರಿಚ್ಮಂಡ್'ಗೂ ಕರೆಸಿ, ಆದರಿಸಿದ್ದು ವಿಶೇಷ. ಇಂತಹವುಗಳಲ್ಲಿ ಎದ್ದು ಕಾಣುವುದು ರಿಚ್ಮಂಡ್ ನೆಲದಲ್ಲಿ ಯಕ್ಷಗಾನ ಪ್ರಯೋಗ.

ನಂತರ, ಅಂದರೆ ೨೦೧೩-೨೦೧೪'ರ ಕಮಿಟಿಯಲ್ಲಿ ಕಾರ್ಯ ನಿರ್ವಹಿಸಿದವರು ಶ್ರೀಯುತದಾರ ರವಿ ಬೋರೇಗೌಡ (ಅಧ್ಯಕ್ಷರು), ಪ್ರಕಾಶ್ ಕೃಷ್ಣಮೂರ್ತಿ (ಕಾರ್ಯದರ್ಶಿ), ರುದ್ರ ಮೂರ್ತಿ (ಖಜಾಂಚಿ) ಮತ್ತು ಶ್ರೀಮತಿ ದಿವ್ಯಾ ರವಿಶಂಕರ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ). 'ಒಂದಾಗಿ ದುಡಿಯೋಣ' ಎಂಬ ಧ್ಯೇಯ ಎತ್ತಿ ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ ಹಾಗೂ ಅದ್ದೂರಿಯಾಗಿ ಸಂಗೀತ ಸಂಜೆ ಮತ್ತು ಯುಗಾದಿ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದಾರೆ. ಸಂಗೀತ ಸಂಜೆಗೆ ಅಲಂಕರಿಸಿದ್ದ ರಂಗಸ್ಥಳ ವಿಷೇಶವಾಗಿ ಎದ್ದುಕಂಡರೆ, ಯುಗಾದಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳ ಆಗಮನ ಮತ್ತು ಕನ್ನಡ ತಾಯಿ ಮೆರವಣಿಗೆಗಳು ಪ್ರಮುಖ ಆಕರ್ಷಣೆ ಆಗಿತ್ತು.

ಪ್ರಸಕ್ತ ಸಾಲಿನ, ಅಂದರೆ ೨೦೧೫ -೨೦೧೬ರ ಸಮಿತಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಳಾ ಅಧ್ಯಕ್ಷರಾಗಿ ಶ್ರೀಮತಿ ಸಾಂಚಿತ ಶಶಿಕುಮಾರ (ಅಧ್ಯಕ್ಷರು), ನಟರಾಜ ಹಳೇಬೀಡು (ಉಪಾಧ್ಯಕ್ಷರು),ಆನಂದ್ ನಾರಾಯಣಪ್ಪ (ಕಾರ್ಯದರ್ಶಿ), ಚೇತನ್ ಗೌಡ(ಉಪ ಕಾರ್ಯದರ್ಶಿ), ಸಂಜಯ್ ಕಾಲಶೆಟ್ಟಿ (ಖಜಾಂಚಿ), ಮಂಜುನಾಥ್ ರೆಡ್ಡಿ (ಉಪ ಖಜಾಂಚಿ), ರಶ್ಮಿ ಅಚ್ಯುತ (ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ),ಶ್ರೀಕೃಷ್ಣ ಚಿತ್ತೂರ್ (ಉಪ ಸಾಂಸ್ಕೃತಿಕ ಕಾರ್ಯಕ್ರಮಗಳ ಕಾರ್ಯದರ್ಶಿ) ಪದಾಧಿಕಾರವನ್ನು ತೆಗೆದುಕೊಂಡು "ಕನ್ನಡ ಉಳಿಸಿ ಮತ್ತು ಕನ್ನಡ ಬೆಳೆಸಿ" ಎಂಬ ಧ್ಯೇಯವನ್ನು ಕನ್ನಡಿಗರ ಮನೆ ಮನೆಯಲ್ಲಿ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರತರಾಗಿರುತ್ತಾರೆ. "ದೂರ ತೀರದಲ್ಲಿ ಒಂದು ಭಾವ ಸಂಜೆ" ಎಂಬ ಧ್ಯೇಯ ದೊಂದಿಗೆ ಭರ್ಜರಿಯಾದ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿರುತ್ತಾರೆ. ಪ್ರಥಮ ಬಾರಿಗೆ ಮಕ್ಕಳಿಗಾಗಿ ಪ್ರತಿಬಾ ಸ್ಪರ್ದೆಯನ್ನು ಏರ್ಪಡಿಸಿರುತ್ತಾರೆ. ಕನ್ನಡ ಸಂಸ್ಕೃತಿ ಮತ್ತು ಕಲೆಯನ್ನು ಹೊರನಾಡಿನಲ್ಲಿ ಹೆಚ್ಚು ಪ್ರಜ್ವಲಿಸುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರತರಾಗಿರುತ್ತಾರೆ

ಇಲ್ಲಿವರೆಗಿನ ಅಂಕಿ ಅಂಶದ ಪ್ರಕಾರ ರಿಚ್ಮಂಡ್ ಕನ್ನಡ ಸಂಘವು ಕನಿಷ್ಟ ನೂರೈವತ್ತು ಕನ್ನಡಿಗರ ಸಂಸಾರಗಳನ್ನು ಸದಸ್ಯರನ್ನಾಗಿ ಹೊಂದಿದೆ ಎನ್ನಬಹುದು.

ಕನ್ನಡ ಭಾಷೆಯನ್ನು ಎತ್ತಿ ಹಿಡಿಯುವ, ಮುಂದಿನ ಪೀಳಿಗೆಯಲ್ಲೂ ಕನ್ನಡತನವನ್ನು ಉಳಿಸಿ, ಬೆಳೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೇ ಧ್ಯೇಯವಾಗಿಟ್ಟುಕೊಂಡು ಬೆಳೆಸಿರುವ ಈ ಸಂಸ್ಥೆ 'ಲಾಭ ಉದ್ದೇಶರಹಿತ' ಸಂಸ್ಥೆ (a non-profit organization).

ಹುದುಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ 'ಸಂಕ್ರಾಂತಿ' ಹಬ್ಬಕ್ಕೆ "ಸಂಗೀತ ಸಂಜೆ" ಕಾರ್ಯಕ್ರಮ, ವರ್ಷದ ಹಬ್ಬ 'ಉಗಾದಿ', ಬೇಸಿಗೆ ರಜೆಯಲ್ಲಿ ಪಿಕ್ನಿಕ್, ಬೆಳಕಿನ ಹಬ್ಬ 'ದೀಪಾವಳಿ' ಹಾಗೂ 'ಕನ್ನಡ ರಾಜ್ಯೋತ್ಸವ' ಇವುಗಳು ಸಂಘದ ಪ್ರಮುಖ ಕಾರ್ಯಕ್ರಮಗಳು. ಇದಲ್ಲದೇ ಸ್ಥಳೀಯ ದೇವಸ್ಥಾನವನ್ನು ಬೆಂಬಲಿಸುವ ಉದ್ದೇಶದಿಂದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಭಾರತೀಯ ಸಂಸ್ಕೃತಿಯನ್ನು ಉಳಿಸುವಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯೇ ಮೊದಲಾದವುಗಳಲ್ಲೂ ಸಂಘವು ಸಕ್ರಿಯ ಪಾತ್ರವಹಿಸಿದೆ.

'ಆಪ್ತಮಿತ್ರ', 'ಮತದಾನ', 'ಮುಂಗಾರು ಮಳೆ', 'ನಾನು ಗಾಂಧಿ', 'ಮಾತಾಡ್ ಮಾತಾಡ್ ಮಲ್ಲಿಗೆ' ಮುಂತಾದ ಚಲನಚಿತ್ರಗಳನ್ನು ರಿಚ್ಮಂಡ್ ಕನ್ನಡಿಗರು ತೆರೆ ಮೇಲೆ ನೋಡುವ ಸೌಭಾಗ್ಯವನ್ನು ಒದಗಿಸಿತ್ತು.

ಚಿತ್ರರಂಗದ ಕಣ್ಮಣಿಗಳಾದ ಶ್ರೀನಾಥ್, ಗೀತ, ಸರಿತ, ಸರೋಜಾದೇವಿ, ನಂಜುಂಡೇಗೌಡ, ನಾಗತಿಹಳ್ಳಿ ಚಂದ್ರಶೇಖರ್, ಬಿ.ಕೆ.ಸುಮಿತ್ರ ಅವರುಗಳನ್ನು ಭೇಟಿ ಮಾಡಿಸುವುದರ ಮೂಲಕ ಚಿತ್ರರಂಗವನ್ನು ಪ್ರೋತ್ಸಾಹಿಸುವ ದಿಶೆಯಲ್ಲೂ ಹೆಜ್ಜೆ ಇಟ್ಟಿದೆ. ಪ್ರೊ.ಕೃಷ್ಣೇಗೌಡರೇ ಮೊದಲಾದ ಸಾಹಿತ್ಯ ಕ್ಷೇತ್ರದವರನ್ನು ಸನ್ಮಾನಿಸಿ ಹೆಮ್ಮೆ ಪಡೆದಿದೆ.

ಆರ್ಥಿಕವಾಗಿ ತೀರಾ ಶಕ್ತಿಯುತವಾಗಿಲ್ಲದ ಕಾರಣ ದೇಣಿಗೆ ನೀಡುವ ಅಥವಾ ಸೇವ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿಲ್ಲ. ಕಾವೇರಿ ಸಂಘದದವರೊಡಗೂಡಿ ಶ್ರೀಯುತರಾದ ಪಿ.ಬಿ.ಶ್ರೀನಿವಾಸ್ ಅವರ ಸಹಾಯ ನಿಧಿಗೆ ದೇಣಿಗೆ ನೀಡಿದೆ. ಅಕ್ಕ ಸಂಸ್ಥೆಯೊಂದಿಗೆ ಕೈಗೂಡಿಸಿ ೨೦೦೮'ರಲ್ಲಿ ದೇಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

'ಕಲಿ-ನಲಿ' ಕಾರ್ಯಕ್ರಮದ ಮೂಲಕ ಸಂಘದ ಮಕ್ಕಳಿಗೆ ಕನ್ನಡ ಪಾಠ ಹೇಳಿಕೊಡುವ ಪ್ರಯತ್ನ ನೆಡೆಸಿದೆ. ಅದಲ್ಲದೆ, ಸಂಘದಲ್ಲಿ ವೈದ್ಯರ ಜ್ಞ್ನಾನವನ್ನು ಉಪಯೋಗಿಸಿಕೊಂಡು ಜನರಲ್ಲಿ ಆರೋಗ್ಯದ ವಿಷಯದಲ್ಲಿ ಅರಿವು ಮೂಡಿಸುವ ಉತ್ತಮ ಪ್ರಯತ್ನವನ್ನೂ ಮಾಡಿದೆ.

ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಸಕ್ರಿಯವಾಗಿ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದೆ. ಆರ್ಥಿಕವಾಗಿ ಹೆಚ್ಚು ಬಲಯುಕ್ತವಾಗಿ ಅಮೇರಿಕಕ್ಕೆ ಆಗಮನಿಸುವ ಕಲಾವಿದರು / ಸಾಹಿತಿಗಳನ್ನು ನಮ್ಮಲ್ಲಿಗೂ ಕರೆಸಿಕೊಳ್ಳುವುದರ ಮೂಲಕ ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ತನ್ನ ಬೆಂಬಲ ನೀಡುವ ಸದುದ್ದೇಶವನ್ನು ಹೊಂದಿದೆ.

About RKS

Richmond Kannada Sangha is a non-profit organization of many Indian origin Kannada speaking families residing in the greater Richmond area promoting literary, educational and cultural values and activities, facilitating charitable events and being a part of the intercultural society in United States of America.

Past Committees

2015 to 2016

Mrs. Sanchitha Shashi Kumar, President

Mr. Nataraj Halebeedu, Vice President

Mr. Anand Narayanappa, Secretary

Mr. Kantharaj Saligrama, Secretary

Mr. Kantharaj Saligrama, Secretary

Mr. Chetan Gowda, Joint-Secretary

Mr. Sanjay Kalashetty, Treasurer

Mr. Manjunath Reddy, Joint-Treasurer

Mrs. Rashmi Achutha, Cultural Director

Mr. Krishna Chittur, Joint-Cultural Director

2013 to 2014

Shri Ravi Boregowda (President)

Shri Prakash Krishnamurthy (Secretary)

Shri Rudramurthy Tumkur (Treasurer)

Shrimati Divya Ravishankar (Cultural Director)

2011 to 2012

Shri Sanjeev Giribhattanavar (President)

Shri KrishnaMurthy Girimaji (Secretary)

Shri Venkatesh Bacchu (Treasurer)

Shrimati Namitha Nagaraj & Shri Pt.Rajagopal (Cultural Director)

2009 to 2010

Shri Ramesh Kundur (President)

Shri Suresh Gowda (Secretary)

Shri Anil Kumar (Treasurer)

Shrimati Arathi Venkatesh (Cultural Director)

2007 to 2008

Shri Srinath Bhalle (President)

Shri Ravi Boregowda (Secretary)

Shri Avinash Pandrinath (Treasurer)

Shrimati Sujatha Kumar (Cultural Director)

2005 to 2006

Shri Pavani Ram (President)

Shrimati Latha Kumar (Secretary)

Shri Girish Ramamurthy (Treasurer)

2002 to 2004

Shri Gopalakrishna (President)

Shrimati Ahalya Vijay (Secretary)

Shri Ganesh Nayak (Treasurer)

2001 to 2002

Shri Ravindra (President)

Shri Madhu Upadhya (Secretary)

Shri Sathya Venkataraman (Treasurer)

Achievements

Award